Kannada
kn
HomeContact UsFAQBlog

‘ಫಾರ್ ಯು’ ಎಂದರೇನು?

‘ಫಾರ್ ಯು’ ಫೀಡ್ ಅನ್ನು ನೀವು ಮೀಶೊ ಅಪ್ಲಿಕೇಶನ್ ತೆರೆದಾಗ ಮೊದಲ ಪುಟದಲ್ಲಿ ನೋಡುತ್ತೀರಿ. ಮೀಶೊ ಪ್ರತಿದಿನ ಸಾವಿರಾರು ಪ್ರಾಡಕ್ಟ್ ಕ್ಯಾಟಲಾಗ್‌ಗಳನ್ನು ಅಪ್‌ಲೋಡ್ ಮಾಡುತ್ತದೆ. ಇದರಲ್ಲಿ ಮೀಶೊ ನಿಮಗೆ ‘ಫಾರ್ ಯು’ ಸೆಕ್ಶನ್‌ನಲ್ಲಿ ಮಾತ್ರ 250 ಕ್ಯಾಟಲಾಗ್‌ಗಳನ್ನು ತೋರಿಸುತ್ತದೆ.

‘ಫಾರ್ ಯು’ ಕ್ಯಾಟಲಾಗ್‌ಗಳು:

  • ‘ಫಾರ್ ಯು’ ಕ್ಯಾಟಲಾಗ್‌ಗಳಲ್ಲಿರುವ ವಿಶೇಷತೆ ಏನೆಂದರೆ ನೀವಿಲ್ಲಿ 3.5 ಗಿಂತ ಮೇಲಿನ ರೇಟಿಂಗ್‌ಗಳಿರುವ ಉತ್ಪನ್ನಗಳನ್ನು ಕಾಣಬಹುದು ಮತ್ತು ಇದನ್ನು ಕನಿಷ್ಠ ಪಕ್ಷ 4 ಜನರು ಪರಿಶೀಲಿಸಿರುತ್ತಾರೆ. ಇದರರ್ಥ ಈ ಕ್ಯಾಟಲಾಗ್‌ಗಳನ್ನು ಇತರ ರಿಸೆಲ್ಲರ್‌ಗಳ ಕಸ್ಟಮರ್‌ಗಳ ಮೂಲಕ ಮೆಚ್ಚುಗೆ ನೀಡಲಾಗಿದೆ ಎಂದಾಗಿದೆ.
  • ಮೀಶೊ ಪ್ರತಿ 15 ನಿಮಿಷಗಳಿಗೊಮ್ಮೆ 'ಫಾರ್ ಯು' ಸೆಕ್ಶನ್‌ನಲ್ಲಿ ಹೊಸ ಕ್ಯಾಟಲಾಗ್‌ಗಳನ್ನು ಅಪ್‌ಲೋಡ್ ಮಾಡುತ್ತದೆ - ಪ್ರತಿ ದಿನ ಬೆಳಗ್ಗೆ 8.30 ರಿಂದ ರಾತ್ರಿ 10.00 ರವರೆಗೆ.
  • ಕೆಲವೊಮ್ಮೆ, ಈ ಸೆಕ್ಶನ್‌ನಲ್ಲಿ ಕೆಲವೊಂದು ಕ್ಯಾಟಲಾಗ್‌ಗಳನ್ನು ಪುನಃ ಪುನಃ ತೋರಿಸಲಾಗಿದೆ ಎಂಬುದನ್ನು ನೀವು ನೋಡಬಹುದು. ಇದರರ್ಥ ಇದೆಲ್ಲಾ ಕ್ಯಾಟಲಾಗ್‌ಗಳು ಎಲ್ಲಾ ಸಮಯದಲ್ಲಿಯೂ ಅತ್ಯುತ್ತಮ ಸೆಲ್ಲರ್‌ಗಳು ಎಂದೆನಿಸಿದ್ದು ನಮ್ಮ ರಿಸೆಲ್ಲರ್‌ಗಳಿಗೆ ಆರ್ಡರ್‌ಗಳನ್ನು ನೀಡಲು ಖಾತ್ರಿಪಡಿಸಿದವುಗಳಾಗಿವೆ. ಇವುಗಳನ್ನು ಹಂಚಿಕೊಳ್ಳುವುದು ನಿಮಗೆ ಆರ್ಡರ್‌ಗಳನ್ನು ನೀಡುವ ಹಾಗೆ.

ಹಾಗಾಗಿ, 'ಫಾರ್ ಯು' ಫೀಡ್ ಎಂಬುದು ನಿಮಗೆ ಹೆಚ್ಚಿನ ಆರ್ಡರ್‌ಗಳನ್ನು ಪಡೆಯಲು ಅವಕಾಶವಿರುವ ಸ್ಥಳವಾಗಿದ್ದು ಪ್ರಾಡಕ್ಟ್‌ಗಳನ್ನು ಹಂಚಿಕೊಳ್ಳುವುದನ್ನು ಆರಂಭಿಸುವ ಉತ್ತಮ ಸ್ಥಳವಾಗಿದೆ.

'ಫಾರ್ ಯು' ಬ್ಯಾನರ್‌ಗಳು:

  • 'ಫಾರ್ ಯು' ಪುಟದ ಮೇಲ್ಭಾಗದಲ್ಲಿ ನೀವು ಇಮೇಜ್‌ಗಳಂತಹ ಬ್ಯಾನರ್‌ಗಳನ್ನು ನೋಡುತ್ತೀರಿ.
  • ಈ ಬ್ಯಾನರ್‌ಗ ಮೂಲಕ ಉತ್ತಮ ಆಫರ್‌ಗಳು ಮತ್ತು ಡೀಲ್‌ಗಳು, ಉತ್ತಮ ಮಾರಾಟ ಕ್ಯಾಟಲಾಗ್‌ಗಳು, ಬ್ರ್ಯಾಂಡ್ ನ್ಯೂ ಕಲೆಕ್ಶನ್ಸ್, ಹೊಸ ಟ್ರೆಂಡ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಕುರಿತು ಮೀಶೊ ನಿಮಗೆ ಹೇಳುತ್ತದೆ.
  • ಪ್ರತಿಯೊಬ್ಬ ರಿಸೆಲ್ಲರ್‌ಗೆ ಎಲ್ಲಾ ಉತ್ಪನ್ನಗಳನ್ನು ತೋರಿಸುವುದು ಸಾಧ್ಯವಲ್ಲದ ಕಾರಣ, ಸಾಕಷ್ಟು ಸಮಯವನ್ನು ಉಳಿಸುವ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುವುದಕ್ಕಾಗಿ ಬ್ಯಾನರ್‌ಗಳನ್ನು ಪ್ರಸ್ತುತಪಡಿಸಲಾಗಿದೆ.
  • ಹಬ್ಬದ ಅಥವಾ ಸೀಸನಲ್ ಟ್ರೆಂಡ್‌ಗಳಿಗಾಗಿ ಬ್ಯಾನರ್‌ಗಳು ಉತ್ತಮ ವಿಧಾನಗಳಾಗಿವೆ. ಪ್ರತಿದಿನ ಬ್ಯಾನರ್‌ಗಳನ್ನು ನೋಡುವುದು ಮುಖ್ಯವಾಗಿದೆ ಇದರಿಂದ ಇತ್ತೀಚಿನ ಟ್ರೆಂಡ್‌ಗಳು ಮತ್ತು ಇತ್ತೀಚಿನ ಕ್ಯಾಟಲಾಗ್‌ಗಳನ್ನು ಗುರುತಿಸಬಹುದು. ಯಾವುದು ಟ್ರೆಂಡ್‌ನಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರಂತೆ ಮಾರಾಟ ಮಾಡಲು ಬ್ಯಾನರ್‌ಗಳು ಸಹಾಯ ಮಾಡುತ್ತವೆ.
  • ಸೇಲ್ ಇರುವ ದಿನಗಳು ಮತ್ತು ಸೇಲ್ ಇಲ್ಲದ ದಿನಗಳಲ್ಲಿ ಕೂಡ ಆಫರ್‌ಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
  • ಸೇಲ್ ಇಲ್ಲದ ದಿನಗಳಲ್ಲಿ ಆಫರ್‌ಗಳು, ಡಿಸ್ಕೌಂಟ್‌ಗಳು, ಟ್ರೆಂಡ್‌ಗಳು, ಹೊಸ ಕ್ಯಾಟಲಾಗ್‌ಗಳು, ಹೊಸ ಕಲೆಕ್ಶನ್‌ಗಳು ಮತ್ತು ನಡೆಯುತ್ತಿರುವ ಈವೆಂಟ್‌ಗಳು ಅಥವಾ ಮುಂಬರುತ್ತಿರುವ ಈವೆಂಟ್‌ಗಳಿಗಾಗಿ ಸೀಸನ್ ಅಥವಾ ಹಬ್ಬದ ಕ್ಯಾಟಲಾಗ್‌ಗಳಿವೆ.
  • ಸೇಲ್ ದಿನಗಳಲ್ಲಿ, ಶೇಕಡಾವಾರು ಡಿಸ್ಕೌಂಟ್‌ಗಳು ಮತ್ತು ಶಿಪ್ಪಿಂಗ್ ಡಿಸ್ಕೌಂಟ್‌ಗಳಲ್ಲಿ ಬ್ಯಾನರ್‌ಗಳಿವೆ; ಹಾಗಾಗಿ ಬ್ಯಾನರ್‌ಗಳು ಟ್ರೆಂಡಿ ಪ್ರಾಡಕ್ಟ್‌ಗಳು, ಆಫರ್‌ಗಳು ಮೊದಲಾದವುಗಳನ್ನು ಹುಡುಕುವುದಕ್ಕೆ ನಿಜಕ್ಕೂ ಕಿರಿಕಿರಿಇಲ್ಲದ ವಿಧಾನವಾಗಿದೆ. 
  • ಬ್ಯಾನರ್‌ಗಳು ನಿಮಗಾಗಿ ಹೆಚ್ಚು ಮಾರಾಟವಾಗುವ ಕ್ಯಾಟಲಾಗ್‌ಗಳನ್ನು ಸಂಯೋಜಿಸುತ್ತವೆ. ಉದಾಹರಣೆಗೆ, ಲೇಯರ್ಡ್ ಮಂಗಳಸೂತ್ರಗಳು ಈಗ ಹೆಚ್ಚು ಟ್ರೆಂಡ್‌ನಲ್ಲಿದೆ, ಹೆಚ್ಚಿನ ಮಾರಾಟದ ಲೇಯರ್ ಹೊಂದಿರುವ ಮಂಗಳಸೂತ್ರಗಳನ್ನು ಒಳಗೊಂಡ ಅತ್ಯುತ್ತಮ ಕ್ಯಾಟಲಾಗ್‌ಗಳನ್ನು ತೋರಿಸುವ ಬ್ಯಾನರ್ ಅನ್ನು ನೀವು ಹೆಚ್ಚಾಗಿ ನೋಡಬಹುದು. ನಿಮ್ಮ ಗ್ರಾಹಕರೊಂದಿಗೆ ನೀವು ವಿಶ್ವಾಸದಿಂದ ಕ್ಯಾಟಲಾಗ್‌ಗಳನ್ನು ಹಂಚಿಕೊಳ್ಳಬಹುದು.

ಕ್ಯಾಟಗರಿ ಲ್ಯಾಂಡಿಂಗ್ ಪುಟಗಳು:

  • ನಿಮ್ಮ ಬ್ರ್ಯಾಂಡ್ ಅನ್ನು ರಚಿಸಲು, ಟ್ರೆಂಡ್‌ನಲ್ಲಿರುವ ಮತ್ತು ಬೇಡಿಕೆಯಲ್ಲಿರುವ ಐಟಂಗಳ ಉತ್ತಮ ಕ್ಯಾಟಲಾಗ್‌ಗಳನ್ನು ನೀವು ಪೋಸ್ಟ್ ಮಾಡಬೇಕು. ‘ಫಾರ್ ಯು’ ಸೆಕ್ಶನ್‌ನಲ್ಲಿ ನೀವು ಕ್ಯಾಟಗರಿ ಲ್ಯಾಂಡಿಂಗ್ ಪುಟಗಳನ್ನು ಹುಡುಕಬಹುದು.
  • ನಿರ್ದಿಷ್ಟ ಕ್ಯಾಟಗರಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಇದನ್ನು ಪರಿಚಯಿಸಲಾಗಿದೆ. ಒಂದೇ ರೀತಿಯ ಅಥವಾ ವಿಧಾನದ ಸ್ಟೈಲ್ ಹೊಂದಿರುವ ಪ್ರಾಡಕ್ಟ್‌ಗಳನ್ನು ಕ್ಯಾಟಗರಿಗಳಲ್ಲಿ ಹೊಂದಿಸಿರುವ 70-80 ಕ್ಯಾಟಲಾಗ್‌ಗಳನ್ನು ನೀವು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

‘ಫಾರ್ ಯು’ ಫೀಡ್‌ನಲ್ಲಿ ಏನು ಲಭ್ಯವಿದೆ ಎಂಬುದನ್ನು ನೀವು ಅರಿತುಕೊಂಡಿದ್ದೀರಿ, ಅನ್ವೇಷಿಸಿ ಮತ್ತು ಹಂಚಿಕೊಳ್ಳಿ. ಹ್ಯಾಪಿ ರಿಸೆಲ್ಲಿಂಗ್!