Kannada
kn
HomeContact UsFAQBlog

ಇಮೇಜ್ ಎಡಿಟ್ ಮಾಡುವುದು ಹೇಗೆ?

ನಮಸ್ಕಾರ ಮೀಶೊ ಉದ್ಯೋಗಿಗಳೇ! ನಮ್ಮ ಟಾಪ್ ರಿಸೆಲ್ಲರ್‌ಗಳು ಉತ್ತಮ ಅನುಬಂಧವನ್ನು ಏರ್ಪಡಿಸಿಕೊಳ್ಳುವುದಕ್ಕಾಗಿ ಕ್ಯಾಟಲಾಗ್ ಚಿತ್ರಗಳನ್ನು ಎಡಿಟ್ ಮಾಡಲು ಆದ್ಯತೆ ನೀಡುತ್ತಾರೆ. ಮೀಶೊ ಕ್ಯಾಟಲಾಗ್‌ಗಳು ಮತ್ತು ರಿವ್ಯೂಗಳಿಂದ ಇಮೇಜ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅವರು ಅತ್ಯಾಕರ್ಷಕ ಕೊಂಬೊಗಳು ಮತ್ತು ಕೊಲೆಜ್‌ಗಳನ್ನು ನಿರ್ಮಿಸುತ್ತಾರೆ.

  • ಎಮೋಜಿಗಳು ಮತ್ತು ಫ್ರೇಮ್‌ಗಳನ್ನು ಬಳಸಿಕೊಂಡು ಇಮೇಜ್ ಎಡಿಟ್ ಮಾಡುವುದು: ನಮ್ಮ ಹೆಚ್ಚಿನ ಟಾಪ್ ರಿಸೆಲ್ಲರ್‌ಗಳು ಮೀಶೊ ಕ್ಯಾಟಲಾಗ್‌ಗಳಿಂದ ಇಮೇಜ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಅಪ್ಲಿಕೇಶನ್‌ನಲ್ಲಿ ಅದನ್ನು ರಚಿಸಿದ ನಂತರ ನಿಮ್ಮ ಬ್ಯುಸಿನೆಸ್ ಲೋಗೋವನ್ನು ನೀವು ಪೇಸ್ಟ್ ಮಾಡಬಹುದು. ಅವರು ಎಡಿಟಿಂಗ್ ಟೂಲ್‌ಗಳನ್ನು ಬಳಸಿಕೊಂಡು ಅತ್ಯಾಕರ್ಷಕ ಎಮೋಜಿಗಳ ಸಹಾಯದಿಂದ ಅಥವಾ ಫ್ರೇಮ್‌ಗಳಿಂದ ಇದನ್ನು ಇನ್ನಷ್ಟು ಆಕರ್ಷಕಗೊಳಿಸುತ್ತಾರೆ.
  • ಇಮೇಜ್ ಸರ್ಚ್: ನಮ್ಮ ಕೆಲವು ಟಾಪ್ ರಿಸೆಲರ್‌ಗಳು ಮೀಶೊ ಪ್ರಾಡಕ್ಟ್ ಐಡಿಗಳನ್ನು (ಇಮೇಜ್‌ನ ಕೆಳಭಾಗದಲ್ಲಿರುವ ಆಲ್ಫಾನ್ಯೂಮರಿಕ್ ಕೋಡ್) ಅಡಗಿಸಲು ಬಯಸುತ್ತಾರೆ ಇದರಿಂದ ಅವರ ಸ್ಪರ್ಧಿಗಳು ಇಮೇಜ್ ಸರ್ಚ್ ಆಪ್ಶನ್ ಮೂಲಕ ಆ ಚಿತ್ರಗಳನ್ನು ಹುಡುಕಲಾಗುವುದಿಲ್ಲ.
  • ಕಾಂಬೊಗಳನ್ನು ರಚಿಸುವುದು: ಕ್ಯಾಟಲಾಗ್‌ನಿಂದ ಮೂರು ಅಥವಾ ನಾಲ್ಕು ಅತ್ಯುತ್ತಮ ಆಕರ್ಷಕ ಪ್ರಾಡಕ್ಟ್ ಇಮೇಜ್‌ಗಳನ್ನು ಬಳಸಿಕೊಂಡು ಆಕರ್ಷಕ ಕೊಂಬೊಗಳನ್ನು ರಚಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ಕಸ್ಟಮರ್‌ಗಳಿಗೆ ಉತ್ತಮ ಚಿತ್ರಗಳಿರುವ ಒಂದು ಚಿತ್ರವನ್ನು ಕಳುಹಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ನಿಮ್ಮ ಗ್ರಾಹಕರು ಕೇವಲ ಒಂದು ಚಿತ್ರವನ್ನು ಡೌನ್‌ಲೋಡ್ ಮಾಡಿದರೆ ಸಾಕು; ಇದು ಅವರ ಸಮಯವನ್ನು ಉಳಿಸುತ್ತದೆ.
  • ರಿವ್ಯೂ ಸೆಕ್ಶನ್‌ನಿಂದ ನೈಜ ಚಿತ್ರಗಳನ್ನು ಎಡಿಟ್ ಮಾಡುವುದು: ನಮ್ಮ ಟಾಪ್ ರಿಸೆಲ್ಲರ್‌ಗಳು ತಮ್ಮ ಕಸ್ಟಮರ್‌ಗಳೊಂದಿಗೆ ಟಾಪ್ ದರದ ಕ್ಯಾಟಲಾಗ್‌ಗಳನ್ನು ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ರಿವ್ಯೂ ಸೆಕ್ಶನ್‌ನಿಂದ ನೈಜ ಚಿತ್ರಗಳನ್ನು ಅವರು ಡೌನ್‌ಲೋಡ್ ಮಾಡುತ್ತಾರೆ ಮತ್ತು ಅವರ ಆದ್ಯತೆಗಳಿಗೆ ಅನುಗುಣವಾಗಿ ಅವನ್ನು ಎಡಿಟ್ ಮಾಡುತ್ತಾರೆ. ನೈಜ ಚಿತ್ರಗಳನ್ನು ಹಂಚಿಕೊಳ್ಳುವುದು ಉತ್ತಮ ಅಭ್ಯಾಸ ಎಂದೆನಿಸಿದ್ದು ಇದು ಸರಿಯಾದ ನಿರೀಕ್ಷೆಗಳನ್ನು ತಣಿಸುತ್ತದೆ.

ಇಮೇಜ್‌ಗಳನ್ನು ಹೇಗೆ ಎಡಿಟ್ ಮಾಡುವುದು ಎಂಬುದನ್ನು ನೀವು ಇದೀಗ ಅರಿತುಕೊಂಡಿದ್ದೀರಿ, ಮುಂದುವರಿಯಿರಿ ಮತ್ತು ಅದನ್ನು ದೊಡ್ಡದನ್ನಾಗಿಸಿ. ಹ್ಯಾಪಿ ರಿಸೆಲ್ಲಿಂಗ್!